Thursday, 22 August 2013

ನೀವು ಹೇಳಿದ್ದೇ ಆಯಿತಲ್ಲ

ಅಂತೂ 2013ರ ಚುನಾವಣೆ ಮುಗಿಯಿತು.
ನಮ್ಮ ರಾಜ್ಯದ ಬಹುತೇಕ ಜನರು, ತಮ್ಮ ಮತವನ್ನು "ಹೋಲ್ ಸೆಲ್ ಆಗಿ, ರಿಟೈಲ್ "ಆಗಿ ಮಾರಾಟ ಮಾಡಿಕೊಂಡಿದ್ದಾರೆ. ಅದನ್ನು ಚುನಾವಣೆಗೆ ಸ್ಪರ್ಧಿಸಿದ್ದ ಬಹುತೇಕ ರಾಜಕಾರಣಿಗಳು ಸಹ ಕೋಟಿಗಳನ್ನು ನೀರಿನಂತೆ ಹರಿಸಿ ಜನರ ಮತ (ಗಳನ್ನು) ವನ್ನು "ಹೋಲ್ ಸೆಲ್ ಆಗಿ, ರಿಟೈಲ್ "ಆಗಿ ಹಣ ಕೊಟ್ಟು ಖರೀದಿಸಿದ್ದಾರೆ. ಅಂತೂ ವ್ಯಾಪಾರ ಚೆನ್ನಾಗಿ ನಡೆದು, ಮತವನ್ನು ಮಾರಿದವರಿಗೆ ಸಂಪೂರ್ಣ ಲಾಭವಾಗಿದೆ. ಮತಗಳನ್ನು ಖರೀದಿಸಿದರಲ್ಲಿ ಕೆಲವೇ ಮಂದಿ ಮುಂದಿನ 5 ವರ್ಷಗಳ ರಾಜಕೀಯ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ಚುನಾವಣೆನೂ ಮುಗಿದು ಸರ್ಕಾರ ರಚನೆಯೂ ಆಗುತ್ತಿದೆ.
-------------------------------------------------------------------------------------------------
ಇಷ್ಟೆಲ್ಲದರ ನಡುವೆ ನಮ್ಮ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಶ್ರೀ ಬಿ. ಎಸ್. ಯಡಿಯೂರಪ್ಪನವರು
ತಮ್ಮ ಕೆ.ಜೆ.ಪಿ. ಪಕ್ಷವನ್ನು ಸ್ಥಾಪಿಸಿ ಬೆಂಕಿ - ಬಿರುಗಾಳಿಯ ಹಾಗೆ ಎದ್ದವರು.
ಮುಂದಿನ ಮುಖ್ಯಮಂತ್ರಿ ನಾನೇ ಅಂತ ಹೇಳುತ್ತಿದ್ದವರು,
ನಿಧಾನವಾಗಿ
ನನ್ನ ಬಿಟ್ಟು ಅದ್ಯಾರು ಸರ್ಕಾರ ನಡೆಸುತ್ತಾರೆ ಅನ್ನೋ ರಾಗ ಬದಲಿಸುತ್ತಾ

3 - 4 ತಿಂಗಳ ಹಿಂದೆ ಹೊಸದಾಗಿ ಸ್ಥಾಪಿಸಿದ್ದ (ಖರೀದಿಸಿದ್ದ) ಕೆ. ಜೆ. ಪಿ. ಪಕ್ಷದ ಪ್ರಚಾರದ ವೈಖರಿ, ಖರ್ಚು ವೆಚ್ಚವನ್ನು ಗಮನಿಸಿದಾಗ, ನೂರಾರು ಕೋಟಿಗಳಷ್ಟು ವ್ಯಯಿಸಿ ಕೊನೆಗೆ
ಸ್ಪರ್ಧಿಸಿದ್ದ ಸ್ಥಾನಗಳಲ್ಲಿ ಗಳಿಸಿದ್ದು.

" 6 " ಸ್ಥಾನ ಮಾತ್ರ.

ನಿಮ್ಮ ಸ್ವಯಂಕೃತ ಅಪರಾಧದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನೀವು ಅಂದಿನಿಂದ ಮೇ 5 ರ ತನಕವೂ
ನಿಮ್ಮ ಮಾತೃ ಪಕ್ಷಕ್ಕೆ ದ್ರೋಹ ಮಾಡಿ, ಅದನ್ನೂ ನಿರ್ನಾಮ ಮಾಡುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿ,
ತಿಂದ ತಟ್ಟೆಯಲ್ಲಿ ಹೇಸಿಗೆಯನ್ನೂ ಮಾಡಿ, ತಮ್ಮ ತವರು ಪಕ್ಷವನ್ನು ಸೋಲಿಸಿ, ಗೆದ್ದೆ ಅಂತ ಬೀಗುತ್ತಾ,
ತಮ್ಮ ಶಕ್ತಿ ಕೇವಲ "6" ಸ್ಥಾನ ಗಳಿಗೆ ಮಾತ್ರವೇ ಸಿಮೀತವಾಗುವಷ್ಟು ಪ್ರಚಂಡ ಸಾಧನೆ ಮಾಡಿದ್ದಾರೆ.
ಹಿಂದೆ ದಿ|| ಎಸ್. ಬಂಗಾರಪ್ಪನವರು ಕಾಂಗ್ರೇಸ್ ಪಕ್ಷದ ವಿರುದ್ಧ ಸೆಡ್ಡು ಹೊಡೆದು "ಕೆ.ಸಿ.ಪಿ" ಪಕ್ಷ ಸ್ಥಾಪಿಸಿ 10 ಸ್ಥಾನಗಳನ್ನು ಪಡೆದಿದ್ದರು,
ಕರ್ನಾಟಕದ ಜನಪ್ರಿಯ ನಾಯಕನೆಂದು ಹೇಳುತ್ತಿವರಿಗೆ "6" ಸ್ಥಾನಗಳೇ ಸಾಕೇ ?

ಈ ಸಂಖ್ಯೆಯನ್ನು ಪಡೆಯಲು ಇಷ್ಟೆಲ್ಲಾ ಮಾಡಬೇಕಾಯಿತಾ ? ಯಡಿಯೂರಪ್ಪನವರೇ ?

ಹಿಂದೆ ಖಾಸಗಿ ವಾಹಿನಿಯಲ್ಲಿ ಸಂದರ್ಶನದಲ್ಲಿ ನೀವೇ ನೀಡಿದ ಹೇಳಿಕೆ "ವಿನಾಶಕಾಲೇ ವಿಪರೀತ ಬುದ್ಧಿ" ನಿಮಗೇ ಅನ್ವಯಿಸಿತು ಅನ್ನಿಸುತ್ತಿಲ್ಲವೇ?

ಹೆಚ್ಚು ಹೇಳದೇ ಒಂದು ಮಾತನ್ನು ಹೇಳಲು ಬರೆಯಲು ಇಷ್ಟಪಡುತ್ತೇನೆ. ಶ್ರೀ ಯಡಿಯೂರಪ್ಪನವರೇ.
ನಂಬಿಕೆ ವಿಶ್ವಾಸ ದ್ರೋಹಗಳನ್ನು ಮಾಡುವವರೂ ಒಂದಲ್ಲ ಒಂದು ಪಶ್ಚಾತ್ತಾಪ, ಶಿಕ್ಷೆ ಅನುಭವಿಸಲೇಬೇಕು.

ರಾಜು ದಾವಣಗೆರೆ

ಕರ್ನಾಟಕ ಸರ್ಕಾರ ಜುಲೈ 10 ರಿಂದ 1ರೂ ಗೆ 1 ಕೆ.ಜಿ. ಅಕ್ಕಿ ಕೊಡುವ ಯೋಜನೆ ಜಾರಿಗೆ ತರುತ್ತಿದೆಯಂತೆ. ಈ ಯೋಜನೆಗೆ "ಅನ್ನ ಭಾಗ್ಯ" ಅನ್ನೋ ಹೆಸರು ನಾಮಕರಣ ಮಾಡಿದ್ದಾರಂತೆ.
ಇವರ ಪ್ರಕಾರ ಜುಲೈ 10 ರಿಂದ 1 ರೂಗೆ ಅಕ್ಕಿ ಪಡೆಯೋ ರಾಜ್ಯದ ಜನರು ಇದುವರೆವಿಗೂ ಅನ್ನದ ಮುಖವನ್ನೇ ನೋಡಿಲ್ಲವೇನೋ ಎಂಬಂತೆ ಹೊಸದಾಗಿ ಅನ್ನದ ಪರಿಚಯವನ್ನು ಮಾಡಿಕೊಡುತ್ತಿದ್ದಾರೇನೋ ಎಂಬ ಸಾಧನೆಯೊಂದಿಗೆ "ಅನ್ನ ಭಾಗ್ಯ" ವನ್ನು ನೀಡಲು ಹೊರಟಿರುವಂತೆ ಕಾಣುತ್ತಿದೆ.

ಬಡವ, ನೀ ಬಡವನಾಗಿಯೇ ಇರು ಎಂಬಂತೆ, ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತಾ,
ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಹೊರಟಂತಿದೆ ಇವರುಗಳ ನಡವಳಿಕೆ

ಈ ರಾಜಕಾರಣಿಗಳು ಆಡುವ ಆಟಗಳನ್ನು ನೋಡುತ್ತಲೇ ಇರಬೇಕು.
ನೋಡ್ತಾ ಇರ್ಬೇಕು ಅಷ್ಟೇ. ನೋಡ್ತಾನೇ ಇರೋಣ.

ರಾಜು ದಾವಣಗೆರೆ